ಉಪ್ಪಿನ ಕಾಯಿ ನಾಲಿಗೆಗೆ ಹಿತಕರ.....ಆರೋಗ್ಯಕ್ಕೆ...? This one of my another article plz read and comment.



   ಉಪ್ಪಿನ ಕಾಯಿ ನಾಲಿಗೆಗೆ                    
                            ಹಿತಕರ.....ಆರೋಗ್ಯಕ್ಕೆ...?

     
     ಮನೆಗೆ ಅಮ್ಮ ಹೇಗೋ, ಹಾಗೆಯೇ ಊಟಕ್ಕೆ ಉಪ್ಪಿನಕಾಯಿ. ಉಪ್ಪಿನಕಾಯಿ ಇಲ್ಲದೇ ಊಟ ಸಂಪೂರ್ಣ ಎನಿಸುವುದಿಲ್ಲ, ಉಪ್ಪಿನಕಾಯಿ ಎಂದಾಕ್ಷಣ ಬಾಯಲ್ಲಿ ನೀರು ಬರುವುದು ಸಹಜ ಇದನ್ನು ಹಿರಿಯರಿಂದ ಹಿಡಿದು ಕಿರಿಯರವರೆಗೂ ಇಷ್ಟಪಡುತ್ತಾರೆ. ಇಂದು ಊಟ ಸಂಪೂರ್ಣವೆನಿಸಿಲ್ಲ ಎಂದರೆ ಉಪ್ಪಿನಕಾಯಿ ಇರಲಿಲ್ಲ ಎಂದರ್ಥ. ಅಮ್ಮ ಮಾಡುವ ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ?.... ಈ ಉಪ್ಪಿನಕಾಯಿಯು ದಕ್ಷಿಣಭಾರತೀಯರ ಊಟದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು, ಅಷ್ಟೇ ಏಕೆ ಉತ್ತರ ಭಾರತದಲ್ಲಿಯೂ ಅರ್ಚಾ ಎಂದು ಕರೆಯಲ್ಪಡುವ ಈ ತಿನಿಸು ನಮ್ಮ ಭಾರತೀಯ ಭೋಜನದ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ ಇದು ಆರೋಗ್ಯಕ್ಕೆ ಹಿತಕರವಲ್ಲದ, ಆಕರ್ಷಕ ಹಣೆಪಟ್ಟಿ ಕಟ್ಟಿಕೊಂಡು ಮಾರುಕಟ್ಟೆ ತಲುಪುತ್ತಿರುವ ಉಪ್ಪಿನಕಾಯಿಗಳಿಂದಾಗಿ, ಹಳ್ಳಿಗಳ ಮನೆಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ರುಚಿಕರವಾದ ಉಪ್ಪಿನಕಾಯಿ ತಯಾರಿಕೆಯು ನಿಧಾನವಾಗಿ ಮರೆಯಾಗುತ್ತಿರುವುದು ಬೇಸರದ ಸಂಗತಿ. ಆದರೆ ಇಷ್ಟು ಪ್ರಾಮುಖ್ಯತೆ ಪಡೆದಿರುವ ಈ ಉಪ್ಪಿನಕಾಯಿಯು ಕೂಡ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಇದರ ಬಳಕೆ ಹೆಚ್ಚಿದರೆ, ಶರೀರಕ್ಕೆ ಮಾರಕವಾಗಿ ಪರಿಣಮಿಸುತ್ತದೆ. 

     ಏಕೆಂದರೆ ಆರೋಗ್ಯದ ವಿಷಯದಲ್ಲಿ ಇದು ನಮ್ಮನ್ನು ತುಂಬಾ ಚೆಲ್ಲಾಟವಾಡಿಸುತ್ತದೆ. ಉಪ್ಪಿನಕಾಯಿ ತಿನ್ನುವುದರಿಂದ ದೇಹದಲ್ಲಿ  ಹೆಚ್ಚು ಉಷ್ಣ ಉಂಟಾಗುವುದರ ಜೊತೆಗೆ ಇತರ ಸಣ್ಣ ಕಾಯಿಲೇಗಳಿಗೂ ಅಣಿ ಮಾಡಿಕೊಡುತ್ತದೆ. ಇನ್ನು ಹೆಣ್ಣು ಮಕ್ಕಳ ವಿಷಯಕ್ಕೆ ಬಂದರೆ ಮುಟ್ಟಿನ ಸಮಯದಲ್ಲಿ ಮಿತವಾಗಿ ಬಳಸುವುದು ತುಂಬಾ ಉತ್ತಮಕಾರ. 

   ಹಾಗೇ ನೋಡಿದರೆ ಸಮಾರಂಭಗಳಲ್ಲಿ ಮೊದಲನೇ ಸ್ಥಾನ ಇದಕ್ಕೆ ಸಲ್ಲುತ್ತದೆ.ಇತರ ತಿನಿಸುಗಳ ಜೊತೆಗೆ ಇದು ಅಲ್ಲಲ್ಲಿ ನಾಲಿಗೆಗೆ ತಲುಪುತ್ತಿದ್ದರೆ ಸಮಾಧಾನವೇನಿಸುತ್ತದೆ. ಕೆಲವರು ಬಾಯಾರಿದಾಗ ಉಪ್ಪಿನಕಾಯಿ ಸೇವಿಸಿ ನೀರು ಕುಡಿಯುವ ಪದ್ಧಿತಿಯು ಉಂಟು. ಉಪ್ಪಿನಕಾಯಿಗಳಲ್ಲಿ ಹೆಚ್ಚಾಗಿ ಉಪಯೋಗಿಸುವ ಕಾಯಿಗಳೆಂದರೆ ನೆಲ್ಲಿಕಾಯಿ,ನಿಂಬೆಕಾಯಿ ಮತ್ತು ಮಿಡಿ ಮಾವಿನಕಾಯಿ. ಈ ಕಾಯಿಗಳನೇಲ್ಲ ತಂದು ಆದರಿಂದ ಉಪ್ಪಿನಕಾಯಿ ಮಾಡಿ ಡಬ್ಬದಲ್ಲಿಟ್ಟರೆ ವರ್ಷದವರೆಗೆ ಇಡಬಹುದು. ಆದ್ರೆ ಇತ್ತಿಚೀನ ದಿನಗಳಲ್ಲಿ ಸಿಟಿ ಲೈಫ್‍ನಿಂದ ಎಲ್ಲರು ಬ್ಯೂಸಿಯಾಗಿ ಬಿಟ್ಟಿದ್ದರೆ. ಹಳ್ಳಿಯ ವಾತವರಣ ಬಿಡಿ ಆಹಾರ ಪದ್ಧತಿಯು ಬದಲಾಗಿ ಬಿಟ್ಟಿದೆ. ಆಗೇಲ್ಲಾ ಹಬ್ಬಗಳಲ್ಲಿ ಊಟಕ್ಕೆ ಮನೆಯಲ್ಲಿ ಮಾಡಿದ ಉಪ್ಪಿನಕಾಯಿಯನ್ನು ಬಳಸುತ್ತಿದ್ದರು ಆದರೆ ಇವಾಗ  ಅಂಗಡಿಯಲ್ಲಿ ಸಿಗುವ ಕೇಮಿಕಾಲ್ ಯುಕ್ತ ಉಪ್ಪಿನಕಾಯಿಯನ್ನ  ಬಳಸುವುದೇ ವಿಪರ್ಯಸ. ಕಾಲ ಬದಲಾದಂತೆಲ್ಲ ನಮ್ಮ ಸಂಸ್ಕøತಿ,ಆಹಾರ ಪದ್ಧತಿಗಳೆಲ್ಲಾ ಬದಲಾಗಿ ಬಿಟ್ಟಿದೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಉಪ್ಪಿನಕಾಯಿಯ ಬೆಡಿಕೆ ಮಾತ್ರ ಕಡಿಮೆಯಾಗಿಲ್ಲಾ. ಅದೇ ಇದರ ಸ್ಪೇಷಲಿಟಿ.

ವಿಶಾಲ ಕರೂರು


Comments