ನೀನ್ನ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷ, ತೃಪ್ತಿ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. "ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿ ಇಲ್ಲ" ಎಂಬ ಗಾದೆಯ ಹಾಗೇ ಅಮ್ಮ ಎಲ್ಲರ ಪಾಲಿಗೆ ಬಿಡಿಸಲಾಗದ ನಂಟು. ತಾಯಿಯೇ ಜೀವಂತ ದೇವತೆ. ಮಕ್ಕಳನ್ನು ಹೆತ್ತು ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ. ಎಂಬುದೆಲ್ಲ ಸರ್ವಕಾಲಿಕ ಸತ್ಯ. ಇದು ಯಾವ ಕಾಲಕ್ಕೂ ಬದಲಾಗಲೂ ಸಾಧ್ಯವೇ ಇಲ್ಲ. ನನ್ನ ತಾಯಿಯೇ ನನಗೆ ಬಹುದೊಡ್ಡ ಆಸ್ತಿ. ಮಕ್ಕಳೆಂದರೆ ಅವಳಿಗೆ ಜೀವ. ಹುಟ್ಟಿದ ಮೂರು ಹೆಣ್ಣು ಮಕ್ಕಳಿಗೆ ಸಮಾನ ಪ್ರೀತಿ ತೋರಿಸಿದೆ. ದೂರದ ಊರಲ್ಲಿ ಓದುವ ನನಗೆ ನೀನು ಬಚ್ಚಿಟ್ಟು ಕೂಡುವ ಹಣವೆಲ್ಲ ಆಸರೆಯಾಗುತ್ತಿತ್ತು.ಪ್ರತಿ ದಿನವೂ ಕರೆ ಮಾಡಿ ಚೆನ್ನಾಗಿ ಓದು ಒಳ್ಳೇಯ ಕೆಲಸಕ್ಕೆ ಹೋಗು ಎಂದು ಹಾರೈಸುತ್ತಿದ್ದೆ. ಇವತ್ತು ನಾನು ಎಲ್ಲರ ಎದುರು ಯಾರ ಸಹಾಯವಿಲ್ಲದೆ ಓಡಾಡುತ್ತೀದ್ದೆನೆಂ...